ಕಥೆ, ಕವಿತೆ, ನಾಟಕ, ಲೇಖನಗಳು ಇವು ಬರಹಗಾರನ ವಿವಿಧ ಅಭಿವ್ಯಕ್ತಿ ಮಾಧ್ಯಮಗಳೆನ್ನುವ ಮಾತು ಸಾಹಿತ್ಯ ಲೋಕದಲ್ಲಿ ಪ್ರಚಲಿತದಲ್ಲಿದೆ. ಒಬ್ಬ ಬರಹಗಾರ ಎಲ್ಲ ಪ್ರಕಾರದ ಮಾಧ್ಯಮಗಳಲ್ಲಿ ಅಭಿವ್ಯಕ್ತಿಗೊಳ್ಳುವುದು ತೀರ ವಿರಳ. ಕೆಲವರಿಗೆ ಕಥೆ, ಕಾದಂಬರಿ ಕೈ ಹಿಡಿದರೆ ಕವಿತೆ ಒಲಿಯುವುದಿಲ್ಲ. ಅದೇರೀತಿ ಕವಿತೆಯನ್ನು ಒಲಿಸಿಕೊಂಡವರಿಗೆ ಕಥೆ ಕಾದಂಬರಿ ಮಾಧ್ಯಮ ಕೈ ಹಿಡಿಯುವುದಿಲ್ಲ. ಈ ತಾರತಮ್ಯವೇ ಬೇಡವೆಂದು ಕೆಲವು ಬರಹಗಾರರು ವಿವಿಧ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಕೃಷಿ ಮಾಡಿರುವ ಉದಾಹರಣೆಯೂ ಉಂಟು. ಯಶವಂತ ಚಿತ್ತಾಲರು ಇದಕ್ಕೊಂದು ಸ್ಪಷ್ಟ ನಿದರ್ಶನ. ಕಥೆ, ಕಾದಂಬರಿ ಮಾಧ್ಯಮದ ಮೂಲಕ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿರುವ ಯಶವಂತ ಚಿತ್ತಾಲರು ಕವಿತೆಗಳನ್ನೂ ರಚಿಸಿರುವರು. ಅವರು ಕವಿತೆಯನ್ನು ಕವಿತೆ ಎಂದು ಕರೆಯದೆ ಅದನ್ನು 'ಲಬಸಾ'ಗಳು ಎಂದು ಹೆಸರಿಸುತ್ತಾರೆ. ಅವರ ಮಾತಿನಲ್ಲಿ 'ಲಬಸಾ'ಗಳು ಎನ್ನುವುದರ ವಿಸ್ತೃತ ರೂಪ ಲಯ ಬದ್ದ ಸಾಲುಗಳು ಎಂದು.
ಒಂದಿಷ್ಟು ಲೇಖನಗಳನ್ನು ಬರೆದಿರುವ ನನಗೂ ಆಗಾಗ 'ಲಬಸಾ'ಗಳನ್ನೂ ಬರೆಯಬೇಕೆನ್ನುವ ವಿಚಿತ್ರವಾದ ಉಮೇದಿಯೊಂದು ಕಾಡಿದ್ದಿದೆ. ಹಾಗೆ 'ಲಬಸಾ'ಗಳನ್ನು ಹಾಳೆಯ ಮೇಲೆ ಗೀಚಿದಾಗಲೆಲ್ಲ ನನಗೆ ಅರಿವಿಲ್ಲದಂತೆ ಪ್ರಾಸಗಳು ಹಣಿಕಿಕ್ಕಿ ತೊಂದರೆಕೊಟ್ಟಿವೆ. ಅದೇಕೋ ಈ ಪ್ರಾಸಗಳಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ನನ್ನದು. ಅದು ನನ್ನ ಬರವಣಿಗೆಯ ಮೀತಿಯೂ ಇರಬಹುದು. ಅದಕ್ಕೆಂದೇ ಈ ಕೆಳಗೆ ಬರೆದ ಸಾಲುಗಳನ್ನು ನಾನು 'ಕವಿತೆ' ಎಂದು ಕರೆಯದೆ 'ಲಬಸಾ'ಗಳು ಎನ್ನುತ್ತೇನೆ. ಎಂದೋ ಬರೆದ 'ಲಬಸಾ'ಗಳು ನನ್ನ ಬ್ಲಾಗಿನ ಓದುಗರಿಗಾಗಿ ಈ ದಿನ................
ನನ್ನದಲ್ಲದ ಬದುಕು
ಹಾರಾಡುವ ಹಕ್ಕಿಗಳನ್ನು
ಹರಿಯುವ ನೀರನ್ನು
ಸುಳಿಯುವ ಗಾಳಿಯನ್ನು
ನೋಡಿದಾಗ ನನಗನಿಸುತ್ತದೆ
ಬದುಕುತ್ತಿದ್ದೇನೆ ನಾನು
ನನ್ನದಲ್ಲದ ಬದುಕನ್ನು
ಕಳೆದು ಹೋಯಿತು ಬಾಲ್ಯ
ಅಪ್ಪನ ಬೆದರಿಕೆಯಲ್ಲಿ
ಅವ್ವ ಕರೆಯುವ
ಗುಮ್ಮನ ಭಯದಲ್ಲಿ
ಕೆಂಗಣ್ಣು ಮೇಷ್ಟ್ರ
ಬೆತ್ತದ ಛಡಿ ಏಟಿನಲ್ಲಿ
ನಾನಾಗಲು ಪಾಸು
ಕಾರಣವಾಯಿತು
ಅಣ್ಣನ ನಾಪಾಸು
ಕಿವಿ ಹಿಂಡಿ ಹೇಳಿದ್ದ ಅಪ್ಪ
ಫೇಲಾದರೆ ಮನೆಯಿಂದ
ಗೇಟ್ ಪಾಸು
ಮರ್ಜಿ ಕಾಯುವ ಕೆಲಸ
ಬೇಡವೆಂದು ಹೇಳಿದ್ದೆ ಅಪ್ಪನಿಗೆ
ಸಿನಿಮಾ ಸೇರುತ್ತೆನೆಂದು
ತೋಳೇರಿಸಿ ಹೇಳಿದ್ದ ಅಪ್ಪ
ಪಾತರದವರು
ನಾವಲ್ಲವೆಂದು
ಮನದನ್ನೆ ಬಂದು
ಮಗುವ ಕೈಗಿತ್ತಾಗ
ಖುಷಿಯಾಯಿತು ಬದುಕು
ರ್ರೀ ಸಂಸಾರ ಬೆಳೆಯುತಿದೆ
ಸಂಬಳವ ಕೈಗಿಡಿ ಎಂದವಳ
ಮಾತು ಬಲು ನಾಜೂಕು
ಕನ್ನಡದ ಕಟ್ಟಾಳು ಸೇರಿಸಿದ್ದೇನೆ
ಮಗಳನ್ನು ಇಂಗ್ಲಿಷ್ ಶಾಲೆಗೆ
ಮನದನ್ನೆಯ ಬಯಕೆಯಂತೆ
ಆದರೂ ಕಲಿಸುತ್ತೇನೆ
ಕನ್ನಡದ ಅ ಆ ಇ ಈ
ನನ್ನವಳ ದೃಷ್ಟಿಗೆ ಬೀಳದಂತೆ
ಬದುಕುವುದು ಹೇಗೆ
ನಿಂದಕರ ನಡುವೆ
ಒಂದು ಮಾತಿಗೆ
ನೂರು ಅರ್ಥ
ಬದುಕಲ್ಲ ಇದು ನಟನೆ
ಕಳೆಯುತಿದೆ ಸಮಯ ವ್ಯರ್ಥ
ಗಮ್ಯವಿಲ್ಲದ ಓಟ
ಓಡುವವರೆ ಎಲ್ಲ
ಹಿಂದೆ ಸರಿಯುವಂತಿಲ್ಲ
ಸಾಗಿ ಬಂದಾಗಿದೆ ದೂರ
ಓಡಲೇ ಬೇಕಿದೆ
ನನ್ನ ನಂಬಿದವರು ಇರುವರಲ್ಲ
---೦೦೦---
ಹಾರಾಡುವ ಹಕ್ಕಿಗಳನ್ನು
ಹರಿಯುವ ನೀರನ್ನು
ಸುಳಿಯುವ ಗಾಳಿಯನ್ನು
ನೋಡಿದಾಗ ನನಗನಿಸುತ್ತದೆ
ಬದುಕುತ್ತಿದ್ದೇನೆ ನಾನು
ನನ್ನದಲ್ಲದ ಬದುಕನ್ನು
ಕಳೆದು ಹೋಯಿತು ಬಾಲ್ಯ
ಅಪ್ಪನ ಬೆದರಿಕೆಯಲ್ಲಿ
ಅವ್ವ ಕರೆಯುವ
ಗುಮ್ಮನ ಭಯದಲ್ಲಿ
ಕೆಂಗಣ್ಣು ಮೇಷ್ಟ್ರ
ಬೆತ್ತದ ಛಡಿ ಏಟಿನಲ್ಲಿ
ನಾನಾಗಲು ಪಾಸು
ಕಾರಣವಾಯಿತು
ಅಣ್ಣನ ನಾಪಾಸು
ಕಿವಿ ಹಿಂಡಿ ಹೇಳಿದ್ದ ಅಪ್ಪ
ಫೇಲಾದರೆ ಮನೆಯಿಂದ
ಗೇಟ್ ಪಾಸು
ಮರ್ಜಿ ಕಾಯುವ ಕೆಲಸ
ಬೇಡವೆಂದು ಹೇಳಿದ್ದೆ ಅಪ್ಪನಿಗೆ
ಸಿನಿಮಾ ಸೇರುತ್ತೆನೆಂದು
ತೋಳೇರಿಸಿ ಹೇಳಿದ್ದ ಅಪ್ಪ
ಪಾತರದವರು
ನಾವಲ್ಲವೆಂದು
ಮನದನ್ನೆ ಬಂದು
ಮಗುವ ಕೈಗಿತ್ತಾಗ
ಖುಷಿಯಾಯಿತು ಬದುಕು
ರ್ರೀ ಸಂಸಾರ ಬೆಳೆಯುತಿದೆ
ಸಂಬಳವ ಕೈಗಿಡಿ ಎಂದವಳ
ಮಾತು ಬಲು ನಾಜೂಕು
ಕನ್ನಡದ ಕಟ್ಟಾಳು ಸೇರಿಸಿದ್ದೇನೆ
ಮಗಳನ್ನು ಇಂಗ್ಲಿಷ್ ಶಾಲೆಗೆ
ಮನದನ್ನೆಯ ಬಯಕೆಯಂತೆ
ಆದರೂ ಕಲಿಸುತ್ತೇನೆ
ಕನ್ನಡದ ಅ ಆ ಇ ಈ
ನನ್ನವಳ ದೃಷ್ಟಿಗೆ ಬೀಳದಂತೆ
ಬದುಕುವುದು ಹೇಗೆ
ನಿಂದಕರ ನಡುವೆ
ಒಂದು ಮಾತಿಗೆ
ನೂರು ಅರ್ಥ
ಬದುಕಲ್ಲ ಇದು ನಟನೆ
ಕಳೆಯುತಿದೆ ಸಮಯ ವ್ಯರ್ಥ
ಗಮ್ಯವಿಲ್ಲದ ಓಟ
ಓಡುವವರೆ ಎಲ್ಲ
ಹಿಂದೆ ಸರಿಯುವಂತಿಲ್ಲ
ಸಾಗಿ ಬಂದಾಗಿದೆ ದೂರ
ಓಡಲೇ ಬೇಕಿದೆ
ನನ್ನ ನಂಬಿದವರು ಇರುವರಲ್ಲ
---೦೦೦---
No comments:
Post a Comment