ನನ್ನ ಪ್ರಕಟಿತ ಪುಸ್ತಕಗಳು

ನನ್ನ ಪ್ರಕಟಿತ ಪುಸ್ತಕಗಳು

೧. ಸಾಧನೆ 

 'ಸಾಧನೆ' ಇದು ನನ್ನ ಮೊದಲ ಕೃತಿ. ಇದುವರೆಗೆ ನೂರಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಒಂದೆರಡು ಕಥೆಗಳನ್ನು ಬರೆದಿರುವೆನಾದರೂ ಪುಸ್ತಕ ರೂಪದಲ್ಲಿ ಪ್ರಕಟವಾದ ಮೊದಲ ಕೃತಿ ಇದು.  ಈ ಸಂದರ್ಭ ನನ್ನ ಮೊದಲ ಪುಸ್ತಕ 'ಸಾಧನೆ'ಯನ್ನು ಪ್ರಕಟಿಸಿದ ಬಾಗಲಕೋಟೆಯ ಬಿ.ವಿ.ವಿ.ಸಂಘದ ವೈರಾಗ್ಯದ ಮಲ್ಲಣಾರ್ಯ ಪ್ರಕಾಶನ ಸಂಸ್ಥೆಗೂ ಮತ್ತು 'ಪೂರ್ಣ ಸತ್ಯ' ಕೃತಿಯನ್ನು ಪ್ರಕಟಿಸುತ್ತಿರುವ ಗುಲಬರ್ಗಾದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಗೂ ನನ್ನ ಕೃತಜ್ಞತೆಗಳು.



'ಸಾಧನೆ' ಪುಸ್ತಕ ಬಿಡುಗಡೆ ಸಂದರ್ಭದಲ್ಲಿನ ಕೆಲವು ಚಿತ್ರಗಳು.






೨. ಪೂರ್ಣ ಸತ್ಯ 

 ದಿನಾಂಕ ೨೦.೦೧.೨೦೧೩ ರಂದು ಗುಲಬರ್ಗಾದ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದವರು ಸುಮಾರು ೫೫ ಪುಸ್ತಕಗಳ ಬಿಡುಗಡೆ ಸಮಾರಂಭ ಆಯೋಜಿಸಿದ್ದರು. ಆ ೫೫ ಕೃತಿಗಳಲ್ಲಿ ನಾನು ಬರೆದ 'ಪೂರ್ಣ ಸತ್ಯ' ಸಹ ಬಿಡುಗಡೆಯಾದ ಕೃತಿಗಳಲ್ಲೊಂದು. 'ಪೂರ್ಣ ಸತ್ಯ' ಇದು ನನ್ನ ಎರಡನೇ ಕೃತಿ. ಆ ಪುಸ್ತಕದ ನನ್ನ ಮಾತುಗಳಲ್ಲಿ ನಾನು ಹೇಳಿದಂತೆ ಇಲ್ಲಿರುವ ೧೫ ಲೇಖನಗಳನ್ನು ಪಟ್ಟಾಗಿ ಕುಳಿತು ಒಂದೇ ಸಲಕ್ಕೆ ಬರೆದವುಗಳಲ್ಲ. ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಬಾಗಲಕೋಟೆಯ ಬಿ.ವಿ.ವಿ.ಸಂಘದ ಸಮಾಚಾರ ಪತ್ರಿಕೆಗೆ ಅತ್ಯಂತ ಪ್ರೀತಿಯಿಂದ ಬರೆದ ಲೇಖನಗಳಿವು.






೩. ಮನದ ಮಾತು 

(೨೦೧೪ ರಲ್ಲಿ 'ಮನದ ಮಾತು' ಕೃತಿ ಬಿಡುಗಡೆಯಾಯಿತು. ನಾನು ಕಳೆದ ಹಲವು ವರ್ಷಗಳಿಂದ ನನ್ನ 'ಮನದ ಮಾತು' ಬ್ಲಾಗಿನಲ್ಲಿ ಬರೆದ ಬರಹಗಳು ಈ ಕೃತಿಯಲ್ಲಿವೆ. ಅದಕ್ಕೆಂದೇ ಪುಸ್ತಕಕ್ಕೆ 'ಮನದ ಮಾತು' ಎನ್ನುವ ಶೀರ್ಷಿಕೆ ನೀಡಿರುವೆ)







(ನನ್ನ ಅನುಪಸ್ಥಿತಿಯಲ್ಲಿ ನನ್ನ ಪತ್ನಿ ಸನ್ಮಾನ ಸ್ವೀಕರಿಸುತ್ತಿರುವ ಸಂದರ್ಭ)

೪. ಅನಾವರಣ 


(ಮೇ ೧, ೨೦೧೫ ರಂದು ನನ್ನ 'ಅನಾವರಣ' ಪುಸ್ತಕ ಬಿಡುಗಡೆಯಾಯಿತು)








೫. ಅನ್ವೇಷಣೆ 

ದಿನಾಂಕ ೨೭. ೧೨. ೨೦೧೫ ರಂದು ನನ್ನ ಕೃತಿ 'ಅನ್ವೇಷಣೆ' ಬಿಡುಗಡೆಯಾಯಿತು.














೬. ಮಹಾಚೇತನ 

ನಿವೃತ್ತ ಶಿಕ್ಷಕರಾದ ಶ್ರೀ ಬಿ.ವಿ.ಮಠ ಅವರ ಅಭಿನಂದನಾ ಗ್ರಂಥಕ್ಕೆ ನಾನು ಸಂಪಾದಕನಾಗಿ ಕಾರ್ಯನಿರ್ವಹಿಸಿದೆನು. ಹಿರಿಯರು, ಶಿಕ್ಷಕರು, ಲೇಖಕರು ಮತ್ತು ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಶ್ರೀ ಬಿ.ವಿ.ಮಠ ಅವರ ಕುರಿತು ಹೊರತಂದ ಈ ಗ್ರಂಥದ ಕಾರ್ಯ ನನಗೆ ತುಂಬ ತೃಪ್ತಿ ಕೊಟ್ಟಿದೆ. 



೭. ಬೊಗಸೆಯಲ್ಲಿ ಕಡಲು


(೮ನೇ ಜನವರಿ ೨೦೧೭) ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ನನ್ನ 'ಬೊಗಸೆಯಲ್ಲಿ ಕಡಲು' ಬಿಡುಗಡೆಯಾಯಿತು.




೮. ಭಾವ ಭಿತ್ತಿ 


ದಿನಾಂಕ ೦೨.೦೨.೨೦೧೮ ರಂದು ಕಲಬುರಗಿಯಲ್ಲಿ ನನ್ನ 'ಭಾವ ಭಿತ್ತಿ' ಪುಸ್ತಕ ಬಿಡುಗಡೆಯಾಯಿತು 





೯. ಹೆಜ್ಜೆ ಮೂಡಿದ ಹಾದಿ 

ಫೆಬ್ರುವರಿ ೩, ೨೦೧೯ ರಂದು ಕಲಬುರಗಿಯಲ್ಲಿ ನನ್ನ 'ಹೆಜ್ಜೆ ಮೂಡಿದ ಹಾದಿ' ಪುಸ್ತಕ ಬಿಡುಗಡೆಯಾಯಿತು. ಕನ್ನಡದ ಮಹತ್ವದ ಲೇಖಕರಾದ ಡಾ.ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.





೧೦. ಹರಿವ ನದಿಗೆ ನೂರು ಕಾಲು 


ಜನವರಿ ೨೭, ೨೦೨೦ ರಂದು ನನ್ನ 'ಹರಿವ ನದಿಗೆ ನೂರು ಕಾಲು' ಪುಸ್ತಕ ಬಿಡುಗಡೆಯಾಯಿತು. ಕನ್ನಡದ ಮಹತ್ವದ ಕಥೆಗಾರ ಮತ್ತು ವಿಮರ್ಶಕ ಶ್ರೀ ರಾಘವೇಂದ್ರ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.





೧೧. ಬೇರಿಗಂಟಿದ ಮರ: ಕಥಾ ಸಂಕಲನ 


ಫೆಬ್ರವರಿ ೭, ೨೦೨೧ ರಂದು ಕಲಬುರಗಿಯಲ್ಲಿ ನನ್ನ 'ಬೇರಿಗಂಟಿದ ಮರ' ಕಥಾಸಂಕಲನ ಬಿಡುಗಡೆಯಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವಿಮರ್ಶಕ ಡಾ.ರಹಮತ್ ತರೀಕೆರೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಲಬುರಗಿಯ ಬಸವ ಪ್ರಕಾಶನದವರು ಈ ಕಥಾಸಂಕಲನವನ್ನು ಪ್ರಕಟಿಸಿ ಬಿಡುಗಡೆ ಮಾಡಿದರು. 







೧೨. ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)

ಇತ್ತೀಚಿಗೆ ನನ್ನ ‘ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ’ ಕಥಾಸಂಕಲನ ಪ್ರಕಟವಾಯಿತು. ಇದು 2023 ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶಕರು ಈ ಕಥಾಸಂಕಲನವನ್ನು ಪ್ರಕಟಿಸಿರುವರು. ಚೇತನ್ ಕಣಬೂರ ಅವರು ಪ್ರೀತಿಯಿಂದ ಪ್ರಕಟಿಸಿರುವರು. ಅವರಿಗೆ ನನ್ನ ಧನ್ಯವಾದಗಳು.
ಈ ಕಥಾಸಂಕಲನದಲ್ಲಿ 15 ಕಥೆಗಳಿವೆ. ಮಯೂರ, ತರಂಗ, ತುಷಾರ, ಕನ್ನಡಪ್ರಭ ಮತ್ತು ಮಾನಸ ಪತ್ರಿಕೆಗಳ ಸಂಪಾದಕರು ಈ ಕಥೆಗಳನ್ನು ಪ್ರಕಟಿಸಿ ನನ್ನನ್ನು ಕನ್ನಡದ ಕಥಾಲೋಕಕ್ಕೆ ಪರಿಚಿಯಿಸಿರುವರು. ಎಲ್ಲ 15 ಕಥೆಗಳನ್ನು ಸೇರಿಸಿ ಈಗ ಕಥಾಸಂಕಲನ ಪ್ರಕಟವಾಗಿದೆ. 
 ನಾನು ಕಥೆಗಳನ್ನು ಬರೆಯುತ್ತೇನೆಂದು ಭಾವಿಸಿರಲಿಲ್ಲ. ಈ ಸೃಜನಶೀಲ ಸಾಹಿತ್ಯದ ಸೃಷ್ಟಿಗೆ ಮೂಲ ಪ್ರೇರಣೆ ಅಮ್ಮನ ಕಥೆಗಳ ಓದು. ಮನೆಗೆಲಸದ ಬಿಡುವಿನ ವೇಳೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಪಟ್ಟಾಂಗ ಕುಳಿತು ಮಾತುಕತೆಯಲ್ಲಿ ತೊಡಗಿರುವಾಗ ನನ್ನ ಅಮ್ಮ ಕಥೆಯ ಪುಸ್ತಕ ಕೈಯಲ್ಲಿ ಹಿಡಿದು ಓದಿನಲ್ಲಿ ಮೈಮರೆಯುತ್ತಿದ್ದಳು. ಹೀಗೆ ಅಮ್ಮನ ಓದಿಗಾಗಿ ಮನೆಗೆ ಬಂದು ಸೇರಿದ ಕಥಾ ಪುಸ್ತಕಗಳು ನನ್ನನ್ನೂ ಬಾಚಿತಬ್ಬಿಕೊಂಡವು. ಈಗ ಅನಿಸುತ್ತದೆ ಅಮ್ಮ ಆ ಕಥೆಗಳಲ್ಲಿ ತನ್ನ ಬದುಕನ್ನು ಹುಡುಕುತ್ತಿದ್ದಳೇನೋ ಎಂದು. ಎಷ್ಟೆಂದರೂ ಕಥೆ ಎನ್ನುವುದು ಒಬ್ಬರ ಬದುಕಲ್ಲದೆ ಮತ್ತೆನಲ್ಲವಲ್ಲ. ಅಮ್ಮ ನನಗೂ ಒಂದಿಷ್ಟು ಕಥೆಯ ಓದಿನ ಗೀಳು ಅಂಟಿಸಿ ಸಾಹಿತ್ಯದ ಮೂಲಕವೇ ಬದುಕಿನ ಅರ್ಥ ಅರಿಯುವ ಪಯಣದ ದಾರಿ ತೋರಿಸಿಕೊಟ್ಟಳು. ಹಾಗೆಂದೆ ಈ ಕಥಾಸಂಕಲನ ನನ್ನಮ್ಮನಿಗೆ, ಭಾವದಲ್ಲಿ ನೆಲೆ ನಿಂತಿರುವ ಅವಳ ನೆನಪುಗಳಿಗೆ ಸಮರ್ಪಿಸಿದ್ದೇನೆ.
-ರಾಜಕುಮಾರ ಕುಲಕರ್ಣಿ






2 comments:

  1. ಅಭಿನಂದನೆಗಳು.

    ReplyDelete
  2. ಮಾನ್ಯರೇ, ಲುಯಿ ಬ್ರೈಲ್‌ ಕುರಿತ ನಿಮ್ಮ ಲೇಖನವನ್ನು ಆಧರಿಸಿ ನಾವು ಸಾಕ್ಷ್ಯ ಚಿತ್ರವನ್ನು ಮಾಡುತ್ತಿದ್ದೇವೆ. ದಯವಿಟ್ಟು ನನ್ನ ಮೊಬೈಲ್‌ ಕರೆ ಸಂಖ್ಯೆಗೆ ತಾವು ಕರೆ ಮಾಡಬೇಕಾಗಿಯೂ ವಿನಂತಿಸಿಕೊಳ್ಳುತ್ತೇನೆ. 9035911023

    ReplyDelete